ಹಕ್ಕುಗಳನ್ನು ಸಂರಕ್ಷಿಸಿ, ಗೌರವಿಸಿ

Posted on Jul 16, 2012 in ಚಟುವಟಿಕೆಗಳು | 0 comments

  ಮಂಗಳೂರು : ‘ಜಗತ್ತಿನ ಪ್ರತಿ ವ್ಯಕ್ತಿಗೂ ಬದುಕುವ ಹಕ್ಕಿದೆ. ಹಕ್ಕುಗಳನ್ನು ಗೌರವಿಸಿ, ಸಮಾನತೆ, ಸಹಬಾಳ್ವೆಯಿಂದ ಬದುಕಿದಾಗ ವಿಶ್ವ ಮಾನವ ಸಿದ್ಧಾಂತ ಸಾಕ್ಷಾತ್ಕಾರವಾಗುತ್ತದೆ’ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಇಜಾಝ್ ಅಹ್ಮದ್ ಅಸ್ಲಮ್ ಹೇಳಿದರು. ಮಂಗಳೂರಿನ ಶಾಂತಿ ಪ್ರಕಾಶನ ಪ್ರಕಟಿಸಿರುವ ‘ಮಾನವ ಹಕ್ಕು ಸಂರಕ್ಷಕರಿಗೊಂದು ಕೈಪಿಡಿ’ ಪುಸ್ತಕವನ್ನು ನಗರದ ಸೇಂಟ್ ಅಲೋಷಿಯಸ್ ಕಾಲೇಜು ಸಭಾಂಗಣದಲ್ಲಿ ಸೋಮವಾರ, ಜುಲೈ 16, 2012ರಂದು ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಸಮಾಜದ ಕೆಳವರ್ಗದ ಜನರಿಗೆ ಅವರ ಹಕ್ಕುಗಳ ಅರಿವಿಲ್ಲದಿರುವುದರಿಂದ ಪ್ರಬಲ ವರ್ಗಗಳಿಂದ...

Read More

ತಫ್ಹೀಮುಲ್ ಕುರ್ಆನ್ (ಕುರ್ಆನ್ ವ್ಯಾಖ್ಯಾನ) ಗ್ರಂಥ ಬಿಡುಗಡೆ

Posted on Jul 6, 2012 in ಚಟುವಟಿಕೆಗಳು | 0 comments

ಮಂಗಳೂರು : ‘ಮೂಲ ತತ್ವಗಳಲ್ಲಿ ಯಾವುದೇ ಗೊಂದಲಗಳಿಲ್ಲದಿದ್ದರೂ ಧರ್ಮಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಧಾರ್ಮಿಕ ಸಂಘರ್ಷಗಳು ಸಂಭವಿಸುತ್ತಿವೆ. ಧಾರ್ಮಿಕ ಉಪದೇಶಗಳ ಅಂತರಾಳಕ್ಕಿಳಿಯುವುದರಿಂದ ಸುಂದರವಾದ ಬದುಕನ್ನು ರೂಪಿಸಲು ಸಾಧ್ಯ’ ಎಂದು ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ತಾಳ್ತಜೆ ವಸಂತ ಕುಮಾರ ಹೇಳಿದರು. ಶಾಂತಿ ಪ್ರಕಾಶನವು ಹೊರತಂದ ‘ತಫ್ಹೀಮುಲ್ ಕುರ್ಆನ್’(ಕುರ್ಆನ್ ಕನ್ನಡ ವ್ಯಾಖ್ಯಾನ) ಗ್ರಂಥವನ್ನು ಶುಕ್ರವಾರ, 06.07.2012ರಂದು ನಗರದ ಪುರಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜಗತ್ತಿನ ಸಂಸ್ಕೃತಿಯ ಹಿನ್ನೆಲೆಯನ್ನು ಅಭ್ಯಸಿಸುವ ಪ್ರತಿಯೊಬ್ಬರಿಗೂ...

Read More

ಸಹೀಹುಲ್ ಬುಖಾರಿ ಕನ್ನಡಾನುವಾದ ಗ್ರಂಥ ಬಿಡುಗಡೆ

Posted on May 12, 2012 in ಚಟುವಟಿಕೆಗಳು | 4 comments

ಬೆಂಗಳೂರು : ಮೇ 12, 2012ರಂದು ಮೌಲಾನ ಅಶ್ರಫ್ ಅಲಿಯವರು ಸಹೀಹುಲ್ ಬುಖಾರಿಯ ಕನ್ನಡಾನುವಾದವನ್ನು ಬೆಂಗಳೂರಿನ ಪುರಭವನದಲ್ಲಿ ಬಿಡುಗಡೆಗೊಳಿಸಿದರು. ಕೆ.ಎಂ.ಅಶ್ರಫ್, ಡಾ. ಮರುಳ ಸಿದ್ಧಪ್ಪ, ಡಾ. ಚಂದ್ರಶೀಖರ ಕಂಬಾರ, ಜ. ಮುಹಮ್ಮದ್ ಅಬ್ದುಲ್ಲಾ ಜಾವೇದ್, ಶ್ರೀ ವೀರಭದ್ರ ಚೆನ್ನಮಲ್ಲ ಮಹಾಸ್ವಾಮಿಗಳು, ಜ. ಮುಹಮ್ಮದ್ ಕುಂಞಿ  ಮೊದಲಾದವರು...

Read More

ಸಹೀಹ್ ಬುಖಾರಿ ಗ್ರಂಥ ಬಿಡುಗಡೆ

Posted on Feb 3, 2012 in ಚಟುವಟಿಕೆಗಳು | 0 comments

ಮಂಗಳೂರು : ಫೆಬ್ರವರಿ 3, 2012, ಶಾಂತಿ ಪ್ರಕಾಶನ ಹೊರತಂದ ಪ್ರವಾದಿ ವಚನ ಸಂಗ್ರಹದ ಕನ್ನಡಾನುವಾದದ ‘ಸಹೀಹ್ ಬುಖಾರಿ’ ಗ್ರಂಥದ ಬಿಡುಗಡೆ ಸಮಾರಂಭ ಮತ್ತು ಸೀರತ್ ಸಮಾವೇಶವು ಶುಕ್ರವಾರ ನಗರದ ಪುರಭವನದಲ್ಲಿ ಜರಗಿತು. ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಖ್ಯಾತ ವಿದ್ವಾಂಸ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಕೇರಳ ಇದರ ಉಪಾಧ್ಯಕ್ಷ ಶೈಖ್ ಮುಹಮ್ಮದ್ ಕಾರಕುನ್ನು ‘ಪ್ರವಾದಿ ಮುಹಮ್ಮದ್ ರ(ಸ) ಬದುಕು ತೀರದ ಪುಸ್ತಕದಂತೆ ಅವರು ಎಲ್ಲರೊಂದಿಗೆ ಸದ್ವರ್ತನೆ ತೋರುತ್ತಿದ್ದರು ಮತ್ತು ಅತ್ಯುತ್ತಮ ನಾಯಕರೂ ಮಾರ್ಗದರ್ಶಕರೂ ಆಗಿದ್ದರು’ ಎಂದರು. ಬಿ.ಎ.ಗ್ರೂಪ್ ಅಧ್ಯಕ್ಷ ಅಹ್ಮದ್ ಹಾಜಿ ಮುಹಿಯುದ್ದೀನ್...

Read More