ನಮ್ಮ ಬಗ್ಗೆ

ಜಮಾಅತೆ ಇಸ್ಲಾಮಿ ಹಿಂದ್ ಮಾನವ ಸಹಜ ಒಲವು ಇಡೀ ವಿಶ್ವದಲ್ಲಿ ಮಾನವನನ್ನು ಅತ್ಯುತ್ತಮ ಜೀವಿಯಾಗಿ ಸೃಷ್ಟಿಸಲಾಗಿದೆ. ಮಾನವನಿಗೆ ಸರಿ-ತಪ್ಪು, ಒಳಿತು-ಕೆಡುಕುಗಳ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ ಪ್ರಧಾನ ಮಾಡಿರುವ ಸೃಷ್ಟಿಕರ್ತನು ಮಾನವನನ್ನು ಇತರೆಲ್ಲ ಜೀವಿಗಳಿಗಿಂತ ಶ್ರೇಷ್ಠವನ್ನಾಗಿ ಮಾಡಿದ್ದಾನೆ. ಅದೇ ರೀತಿ ಮಾನವರೆಲ್ಲರು ಸಮಾನರು ಮತ್ತು ಒಂದೇ ಮಾತಾಪಿತರ ಮಕ್ಕಳು ಎಂದು ಸಾರಿದ್ದಾನೆ. ಆದ್ದರಿಂದ ಮಾನವರೆಲ್ಲರೂ ಪರಸ್ಪರ ಸಹೋದರದೆಂಬ ನೆಲೆಯಲ್ಲಿ ಸೌಹಾರ್ದದಿಂದ ಬಾಳಬೇಕಾದುದು ಅಗತ್ಯ. ಹಾಗೆಯೇ ತನ್ನ ನೈಜ ಸೃಷ್ಠಿಕರ್ತನನ್ನು ಅರಿತು, ಆತನ ಆಜ್ಞೆಗಳಿಗೆ ವಿಧೇಯನಾಗಿ, ಸಮಾಜದಲ್ಲಿರುವ ಸಕಲ ಕೆಡುಕುಗಳ ನಿವಾರಣೆಗೆ ಪ್ರಯತ್ನಿಸುವುದು ಪ್ರತಿಯೊಬ್ಬ ಮಾನವನ ಕರ್ತವ್ಯವಾಗಿದೆ. ಇದುವೇ ಮಾನವ ಸಹಜ ಒಲವೆಂಬ ಸೃಷ್ಠಿಕರ್ತ ವಿಧಿಸಿದ್ದಾನೆ.

ಈ ಧ್ಯೇಯ ಸಾಧನೆ, ದೇವ ಸಂಪ್ರೀತಿ ಮತ್ತು ಪರಲೋಕ ವಿಜಯವನ್ನು ಗುರಿಯಾಗಿಸಿಕೊಂಡು ಸಮಾಜ ಸುಧಾರಕರಾದ ಕೆಲವು ಮಂದಿ ಸೇರಿ 1940ರಲ್ಲಿ ‘ಜಮಾಅತೆ ಇಸ್ಲಾಮಿ’ ಸಂಘಟನೆಯನ್ನು ಸ್ಥಾಪಿಸಿದರು. ಅದರ ಮೊದಲ ಅಧ್ಯಕ್ಷರಾಗಿ ಮಹಾರಾಷ್ಟ್ರದ ಔರಂಗಾಬಾದಿನ ಸಯ್ಯದ್ ಅಬುಲ್ ಆಲಾ ಮೌದೂದಿಯವರನ್ನು ಚುನಾಯಿಸಲಾಯಿತು. ದೇಶ ವಿಭಜನೆಯ ನಂತರ 1948ರಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಾಪನೆಗೊಂಡು, ಇದೀಗ ತನ್ನ ಆರು ದಶಕಗಳ ಅವಧಿಯಲ್ಲಿ ಭಾರತ ದೇಶದಾದ್ಯಂತ ಸಾಮಾಜಿಕ, ರಾಷ್ಟ್ರೀಯ, ರಾಜಕೀಯ ನೆಲೆಯಲ್ಲಿ ಸುಧಾರಣೆ ಮತ್ತು ಸೌಹಾರ್ದತೆಗೆ ದುಡಿಯುತ್ತದೆ.

ಮಾನವರೆಲ್ಲರೂ ಸಮಾನರು, ಒಂದೇ ಮಾತಾಪಿತರ ಮಕ್ಕಳು ಎಂಬುದನ್ನು ತನ್ನ ಆರಂಭ ಕಾಲದಲ್ಲಿಯೇ ಪ್ರತಿಪಾದಿಸುತ್ತಾ ಬಂದಿರುವ ಜಮಾಅತೆ ಇಸ್ಲಾಮಿ ಸಮಾನತೆ, ಘನತೆ, ದಯೆ ಮತ್ತು ಮಾನವೀಯ ಅನುಕಂಪ ಇತ್ಯಾದಿ ಇಸ್ಲಾಮಿ ಮೌಲ್ಯಗಳನ್ನು ಜನರಿಗೆ ಪರಿಚಯಿಸುತ್ತಾ ಬಂದಿದೆ. ಹಿಂಸೆ, ಅಸ್ಪ್ರಶ್ಯತೆ, ವರ್ಗ-ವರ್ಣ-ಜಾತಿ ಆಧಾರಿತ ಭೇದ-ಭಾವಗಳ ನಿವಾರಣೆಗಾಗಿ ಮತ್ತು ದುರ್ಬಲರ ಏಳಿಗೆಗಾಗಿ ಶ್ರಮಿಸುತ್ತಿದೆ. ಅಲ್ಲದೆ, ತನ್ನ ಈ ವಿಶೇಷ ಕಾರ್ಯನೀತಿಗೆ ಬದ್ಧವಾಗಿರುವ ಜಮಾಅತೆ ಇಸ್ಲಾಮಿ ಹಿಂದ್ ಯಾವುದೇ ರೀತಿಯಲ್ಲು ಕೋಮು ವೈಷಮ್ಯ, ವರ್ಗ ಸಂಘರ್ಷ, ಸಾಮಾಜಿಕ ಅವ್ಯವಸ್ಥೆ ಅಥವಾ ಗೊಂದಲ ಹುಟ್ಟಿಸುವಂತಹ ನಿಲುವನ್ನು ಅಂಗೀಕರಿಸುವುದಿಲ್ಲ.

ಈ ಧ್ಯೇಯ ಸಾಧನೆಗಾಗಿ ಜಮಾಅತೆ ಇಸ್ಲಾಮಿ ಹಿಂದ್, ದೇಶದ ಬಹುತೇಕ ಎಲ್ಲ ಪ್ರಮುಖ ಭಾಷೆಗಳಲ್ಲಿ ಅಂತಿಮ ದೇವವಾಣಿ ಪವಿತ್ರ ಕುರಾನ್ ನ ಅನುವಾದ/ವ್ಯಾಖ್ಯಾನ ಗ್ರಂಥಗಳನ್ನು ಪ್ರಕಟಿಸಿದೆ. ಅದರಿಂದ ಮುಸ್ಲಿಮರೂ ಮುಸ್ಲಿಮೇತರರೂ ಅಪಾರ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗೆಯೇ ಪ್ರವಾದಿ ವಚನಗಳು, ಪ್ರವಾದಿ(ಜೀವನ) ಚರ್ಯೆ, ಅನುಚರರ ಜೀವನ ವೃತ್ತಾಂತ ಮತ್ತು ಇತರ ಇಸ್ಲಾಮಿ ಸಾಹಿತ್ಯಗಳನ್ನು ಜನರಿಗೆ ಅವರವರದೇ ಭಾಷೆಗಳಲ್ಲಿ ನೀಡುತ್ತಾ ಬಂದಿದೆ. ಕರ್ನಾಟಕ ರಾಜ್ಯದ ಜನತೆಗೆ ಜಮಾಅತೆ ಇಸ್ಲಾಮಿ ಹಿಂದ್, ಕನ್ನಡ ಇಸ್ಲಾಮಿ ಸಾಹಿತ್ಯ ಪ್ರಚಾರಕ್ಕಾಗಿ ಶಾಂತಿ ಪ್ರಕಾಶನ ಸಂಸ್ಥೆಯನ್ನು 1988 ಮಂಗಳೂರಿನಲ್ಲಿ ಆರಂಭಿಸಿತ್ತು. ಅದು ಈಗ ತನ್ನ 20 ವರ್ಷಗಳನ್ನು ಪೂರೈಸಿದ್ದು ಸುಮಾರು 200ರಷ್ಟು ಕನ್ನಡ ಕೃತಿಗಳನ್ನು ಪ್ರಕಟಿಸಿದೆ.

Post a Reply

Your email address will not be published. Required fields are marked *