ಸಂಚಾರಿ ಪುಸ್ತಕಾಲಯ

ಶಾಂತಿ ಪ್ರಕಾಶನಕ್ಕೆ ಎರಡು ಸಂಚಾರಿ ಪುಸ್ತಕಾಲಯಗಳಿವೆ.

ಸಂಚಾರಿ ಪುಸ್ತಕಲಯವು ಶಾಂತಿ ಪ್ರಕಾಶನದ ಹೊಸ ಪ್ರಯೋಗವಾಗಿದೆ ದಿನಾಂಕ 22-04-2003 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕವಿ ಬಿ.ಎಮ್. ಇದಿನಬ್ಬ ನವರು ಶಾಂತಿ ಸಂಚಾರಿ ಪುಸ್ತಕಾಲಯವನ್ನು ಮಂಗಳೂರಿನಲ್ಲಿ ಉದ್ಘಾಟಿಸಿದರು. ಧಾರ್ಮಿಕ ತಪ್ಪು ತಿಳುವಳಿಕೆಯಿಂದ ತಲ್ಲನಿಸುತ್ತಿರುವ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮದ ನೈಜ ಮೌಲ್ಯಗಳ ಅರಿವು ಮೂಡಿಸುವುದರೊಂದಿಗೆ ಸೌಹಾರ್ದಯುತ ಸಂಬಂಧ ಏರ್ಪಡಿಸುವ ಸದುದ್ದೇಶದೊಂದಿಗೆ ಸಂಚಾರಿ ಪುಸ್ತಕಾಲಯವುಕರ್ನಾಟಕ ರಾಜ್ಯಾದ್ಯಂತ ಸಂಚರಿಸಿ ಕನ್ನಡಿಗರ ಮನೆ ಬಾಗಿಲಿಗೆ ಇಸ್ಲಾಮೀ ಸಾಹಿತ್ಯಗಳನ್ನು ತಲುಪಿಸುವ ಮಹತ್ವ ಪೂರ್ಣ ಕಾರ್ಯವನ್ನು ನಿರ್ವಹಿಸುತ್ತಿದೆ.

ಮಾನವ ಸಮಾನತೆ ಪರಸ್ಪರ ನಂಬಿಕೆ ಧಾರ್ಮಿಕ ಸಹಿಷ್ಣುತೆ ಮತ್ತು ನೈತಿಕ ಮೌಲ್ಯಗಳನ್ನು ಬಿಂಬಿಸುವುದರ ಜತೆಗೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನು ಸಂಚಾರಿ ಪುಸ್ತಕಾಲಯವು ಮಾಡುತ್ತಿದೆ.

ಕರ್ನಾಟಕದ ಎಲ್ಲಾ ಜಿಲ್ಲೆ ಹಾಗೂ ತಲೂಕು ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಶಾಲಾ-ಕಾಲೀಜುಗಳು, ವಿಶ್ವವಿದ್ಯಾನಿಲಯಗಳು, ಸರಕಾರಿ ಕಛೇರಿಗಳು, ನ್ಯಾಯಾಲಯಗಳು, ಧಾರ್ಮಿಕ ಕೇಂದ್ರಗಳು, ಪ್ರವಾಸಿ ಕೇಂದ್ರಗಳು, ಸಾರ್ವಜನಿಕ್ ಸ್ಥಳಗಳು ಇತ್ಯಾದಿ ಎಲ್ಲಾ ಕಡೆಗಳಲ್ಲೂ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಸಂಚಾರಿ ಪುಸ್ತಕಾಲಯಕ್ಕೆ ಕನ್ನಡ ನಾಡಿನ ಜನತೆಯಿಂದ ಸಿಕ್ಕಿದ ಅಭೂತಪೂರ್ವ ಬೆಂಬಲದ ಪರಿಣಾಮವೇ ದಿನಾಂಕ 12-01-2007 ರಂದು ಎರಡನೇ ವಾಹನ ಶಾಂತಿ ಸಾಹಿತ್ಯ ವಾಹಿನಿಯನ್ನು ರಸ್ತೆಗಿಳಿಸಲಾಯಿತು.

ಕನ್ನಡದ ಖ್ಯಾತ ಸಾಹಿತಿ ಡಾ| ಕಯ್ಯಾರ ಕಿಣ್ಣನ್ ರೈ ಯವರು ಶಾಂತಿ ಸಾಹಿತ್ಯ ವಾಹಿನಿಯನ್ನು ಉದ್ಘಾಟಿಸಿದರು.
ಈಗ ಎರಡು ವಾಹನಗಳು ಸಾಹಿತ್ಯದ ಮೂಲಕ ಸೌಹಾರ್ದ ಸಮಾಜ ನಿರ್ಮಾಣದ ಉನ್ನತ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಓಡಾಡುತ್ತಿದೆ.

ಸಂಪರ್ಕ :
ಶಾಂತಿ ಸಂಚಾರಿ ಪುಸ್ತಕಾಲಯ : +91 9980838698,
ಶಾಂತಿ ಸಾಹಿತ್ಯ ವಾಹಿನಿ : +91 9448910815    1 Comment

  1. Masha Allah good job👍

Post a Reply

Your email address will not be published. Required fields are marked *