Tafheemul Quran

ತಫ್ಹೀಮುಲ್ ಕುರ್ಆನ್

ಲೇಖಕರು : ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ
ಅನುವಾದಕರು : ಪಿ. ನೂರ್ ಮುಹಮ್ಮದ್
ಪುಟಗಳು : 512
ಬೆಲೆ : ರೂ. 240.00

Product Description

‘ತಫ್ಹೀಮುಲ್ ಕುರ್ಆನ್’ ಕೇವಲ ಕುರ್ಆನಿನ ಅನುವಾದವಲ್ಲ. ಅದರ ಹೆಸರೇ ಸೂಚಿಸುವಂತೆ ಕುರ್ಆನನ್ನು ಚೆನ್ನಾಗಿ ಗ್ರಹಿಸಲು ಸುಲಭವಾಗುವ ರೀತಿಯಲ್ಲಿ ಮಾಡಲಾದ ಭಾವಾನುವಾದ ಮತ್ತು ವ್ಯಾಖ್ಯಾನವಾಗಿದೆ. ಆದ್ದರಿಂದ ಕುರ್ಆನಿನ ಪದಾನುಪದ ಅನುವಾದದ ರೀತಿಯನ್ನು ಇದರಲ್ಲಿ ಅನುಸರಿಸಲಾಗಿಲ್ಲ. ಈ ಗ್ರಂಥದ ಅಧ್ಯಯನ ನಡೆಸುವ ಪ್ರತಿಯೊಬ್ಬನೂ ಪವಿತ್ರ ಕುರ್ಆನ್ ತನ್ನಿಂದ ಏನು ಬಯಸುತ್ತದೆ. ತಾನು ಏನು, ಈ ಲೋಕದಲ್ಲಿ ತನ್ನ ಪಾತ್ರವೇನು? ಎಂಬುದನ್ನೆಲ್ಲ ಕನ್ನಡಿಯಲ್ಲಿ ನೋಡಿದಂತೆ ಚೆನ್ನಾಗಿ ಗ್ರಹಿಸಬಲ್ಲನು. ಅದರಿಂದ ದೈವಿಕ ಸನ್ಮಾರ್ಗದಲ್ಲಿ ನಡೆಯಲು, ತನ್ಮೂಲಕ ಇಹಲೋಕದಲ್ಲಿ ವಿಜಯವನ್ನೂ ಪರಲೋಕದಲ್ಲಿ ದೇವ ಸಂಪ್ರೀತಿ ಮತ್ತು ಮೋಕ್ಷವನ್ನೂ ಗಳಿಸುವಂತಾಗಲು ಸರಿಯಾದ ಮಾರ್ಗದರ್ಶನ ದೊರೆಯುವುದು.

ಈ ಹಿಂದೆ ಶಾಂತಿ ಪ್ರಕಾಶನವು ‘ಕುರ್ಆನ್ ವ್ಯಾಖ್ಯಾನ’ ಎಂಬ ಹೆಸರಿನಲ್ಲಿ (1991 ಮತ್ತು 1994) ಪ್ರಕಟಿಸಿತ್ತು. ಅನಂತರ ಸಯ್ಯದ್ ಮೌದೂದಿಯವರೇ ರಚಿಸಿದ ‘ಮುಖ್ತಸರ್ ತರ್ಜುಮಯೆ ಕುರ್ಆನ್’ ಎಂಬ ಗ್ರಂಥವನ್ನು ‘ಕುರ್ಆನ್ ಭಾವಾನುವಾದ’ದ ಹೆಸರಲ್ಲಿ ಪ್ರಕಟಿಸಲಾಗಿದೆ. ಆದರೆ ಈ ಎರಡೂ ಗ್ರಂಥಗಳಿಂದ ಪವಿತ್ರ ಕುರ್ಆನಿನ ಅರ್ಥ ಮತ್ತು ವ್ಯಾಖ್ಯಾನವನ್ನು ಗ್ರಹಿಸಬಹುದಾದರೂ ಕುರ್ಆನಿನ ವಿಸ್ತೃತ ಅಧ್ಯಯನ ನಡೆಸುವವರಿಗೆ ಅದು ಪರ್ಯಾಪ್ತವಾಗಲಾರದು. ಜ್ಞಾನಾಕಾಂಕ್ಷಿಗಳ ಈ ತೃಷೆಯನ್ನು ನೀಗಿಸುವ ಉದ್ದೇಶದಿಂದ ಶಾಂತಿ ಪ್ರಕಾಶನವು ‘ತಫ್ಹೀಮುಲ್ ಕುರ್ಆನ್’ನ ಪ್ರಕಾಶನದ ಸಾಹಸಕ್ಕೆ ಕೈ ಹಾಕಿದೆ. ಪ್ರಥಮ ಸಂಪುಟವು ವಾಚಕರ ಕೈಯಲ್ಲಿದ್ದು ಉಳಿದ ಐದು ಭಾಗಗಳು ಶೀಘ್ರ ಭವಿಷ್ಯದಲ್ಲಿ ಪ್ರಕಟವಾಗಬಹುದೆಂದು ನಿರೀಕ್ಷಿಸಬಹುದು.

Reviews

There are no reviews yet.

Be the first to review “ತಫ್ಹೀಮುಲ್ ಕುರ್ಆನ್”