Rashtriya-Bhavaikya

ರಾಷ್ಟ್ರೀಯ ಭಾವೈಕ್ಯ

ಲೇಖಕರು : ಡಾ| ಮುಹಮ್ಮದ್ ಅಬ್ದುಲ್ ಹಕ್ ಅನ್ಸಾರಿ
ಅನುವಾದಕರು : ಮುಹಮ್ಮದ್ ಅಶ್ರಫ್
ಪುಟಗಳು : 24
ಬೆಲೆ : ರೂ. 10.00

Product Description

ರಾಷ್ಟ್ರೀಯ ಭಾವೈಕ್ಯ ಮತ್ತು ಸೌಹಾರ್ದಕ್ಕೆ ಧರ್ಮವೋ ಧರ್ಮಗಳ ಹೆಚ್ಚಳವೋ ಎಂದೂ ಅಡ್ಡಿಯಾಗಿಲ್ಲ. ವಾಸ್ತವದಲ್ಲಿ ಅಧಾರ್ಮಿಕತೆ ಮತ್ತು ಧರ್ಮದ ಹೆಸರಲ್ಲಿ ಇಂದು ತೀರಾ ನಿರ್ಲಜ್ಜೆಯಿಂದ ನಡೆಸಲಾಗುತ್ತಿರುವ ಧರ್ಮ ವಿರೋಧಿ ಕೃತ್ಯಗಳೇ ಸೌಹಾರ್ದಕ್ಕೆ ಪ್ರಮುಖ ತೊಡಕಾಗಿದೆ. ಧರ್ಮದ ಹೆಸರಲ್ಲಿ ಆಗುತ್ತಿರುವ ಕಲಹಗಳ ಹಿಂದೆ ಯಾವುದೇ ಧಾರ್ಮಿಕ ಭಾವನೆ ಕಾರ್ಯಾಚರಿಸುತ್ತಿಲ್ಲ, ಬದಲಾಗಿ ಕೆಲವು ಕ್ಷುಲ್ಲಕ, ವೈಯಕ್ತಿಕ ಮತ್ತು ಸಾಮುದಾಯಿಕ ಉದ್ದೇಶಗಳು ಹಾಗೂ ಭೌತಿಕ ಲಾಭ ಅವುಗಳ ಹಿಂದಿರುತ್ತದೆ. ಜಗಳವು ಮೇಲ್ನೋಟಕ್ಕೆ ಯಾವುದೋ ಸಾಮಾನ್ಯ ಘಟನೆಯೊಂದಿಗೆ ಆರಂಭವಾಗುತ್ತದೆ. ಒಂದು ವೇಳೆ ಜನರು ತಂತಮ್ಮ ಧರ್ಮಗಳ ನೈಜ ಶಿಕ್ಷಣದ ಆಧಾರದಲ್ಲಿ ಅದನ್ನು ಪರಿಹರಿಸಲು ಮುಂದಾದರೆ, ಖಂಡಿತವಾಗಿಯೂ ಆ ಸಾಮಾನ್ಯ ಘಟನೆಯು ದೊಡ್ಡ ದೊಂಬಿಯ ರೂಪ ತಾಳಲಾರದು. ಆದರೆ ಆ ಸಣ್ಣ ಕಿಡಿಯು ಭೀಕರ ಕೊಳ್ಳಿಯ ರೂಪ ತಾಳಿ ಜನರ ಜೀವ-ಸೊತ್ತು-ಮಾನಹರಣವಾಗುವುದರ ಹಿಂದೆ ನಿಜವಾಗಿ ಇರುವುದು ಧರ್ಮದ ಹೆಸರಲ್ಲಿ ನಡೆಸಲಾಗುತ್ತಿರುವ ವ್ಯವಸ್ಥಿತ ಧರ್ಮ ವಿರೋಧಿ ಸಂಚು ಮತ್ತು ಅಧಾರ್ಮಿಕತೆಯಾಗಿದೆ. ರಾಷ್ಟ್ರೀಯ ಭಾವೈಕ್ಯ ಎಂಬ ಕೃತಿಯಲ್ಲಿ ಲೇಖಕರು ರಾಷ್ಟ್ರೀಯ ಭಾವೈಕ್ಯ ಮತ್ತು ಧಾರ್ಮಿಕ ಸೌಹಾರ್ದತೆಯ ಹಾದಿಯಲ್ಲಿ ಯಾವೆಲ್ಲ ವಿಷಯಗಳು ತೊಡಕಾಗಿವೆ ಹಾಗೂ ಸೌಹಾರ್ದ ಮತ್ತು ಭಾವೈಕ್ಯತೆಗೆ ಸಹಾಯವಾಗುವಂತಹ ಮಹತ್ವ ಪೂರ್ಣ ಉಪಾಯಗಳನ್ನು ವಿವರಿಸಿದ್ದಾರೆ.

Reviews

There are no reviews yet.

Be the first to review “ರಾಷ್ಟ್ರೀಯ ಭಾವೈಕ್ಯ”